Tuesday , September 25 2018
Home / ವೈರಲ್ ಸುದ್ದಿಗಳು / ಪಾಕಿಸ್ತಾನಿಯರಿದ್ದ ಬೆಳಗಾವಿಯ ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್ ಬಂಧನ

ಪಾಕಿಸ್ತಾನಿಯರಿದ್ದ ಬೆಳಗಾವಿಯ ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್ ಬಂಧನ

ಸುದ್ದಿವಾಹಿನಿ ಡಾಟ್ ಕಾಂ: ಸಾಮಾಜಿಕ ಜಾಲತಾಣಗಳಲ್ಲೊಂದಾದ ವಾಟ್ಸ್ಯಾಪ್ ಗ್ರೂಪ್ ಒಂದು ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವ ಕಾರಣಕ್ಕಾಗಿ ಆ ಗ್ರೂಪ್ ನ ಅಡ್ಮಿನನ್ನು ಬಂಧಿಸಲಾಗಿದೆ.

ಬಂಧಿಸಲ್ಪಟ್ಟಾತನನ್ನು ಬೆಳಗಾವಿಯ ಮಹವೀರ ನಗರದ ಅಕ್ಷಯ ರಾಜೇಂದ್ರ ಅಲಗೋಡಿಕರ (20) ಎಂದಾಗಿದೆ. ಈತ ವಾಟ್ಸ್ಯಾಪ್ ತಾಣದಲ್ಲಿ “ಓನ್ಲಿ ಟಾಪ್ ಮ್ಯೂಸಿಕ್” ಎಂಬ ಗ್ರೂಪ್ ಒಂದನ್ನು ರಚಿಸಿದ್ದನು. ಇಷ್ಟೇ ಅಲ್ಲದೆ ಈ ಗ್ರೂಪ್ ಗೆ +92 ನಿಂದ ಆರಂಭವಾಗುವ ಮೊಬೈಲ್ ಸಂಖ್ಯೆ ಹೊಂದಿರುವ ಪಾಕಿಸ್ತಾನದ ಪ್ರಜೆಗಳನ್ನೂ ಈ ಗ್ರೂಪ್ ಗೆ ಸೇರಿಸಿದ್ದ. ಅವರು ಈ ಗ್ರೂಪ್ ನಿಂದ ನಿರ್ಗಮಿದಷ್ಟು ಸಲವೂ ಕೂಡಾ ಈತ ಮತ್ತೆ ಮತ್ತೆ ಅವರನ್ನು ಗ್ರೂಪ್ ಗೆ ಸೇರಿಸುತ್ತಿದ್ದ.

ಈ ಪಾಕಿಸ್ತಾನಿ ಪ್ರಜೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತಹಾ ಸಂದೇಶವನ್ನು ಗ್ರೂಪ್ ಗೆ ಕಳುಹಿಸಿದ್ದರು. ಈ ಸಂದೇಶವನ್ನು ಗ್ರೂಪ್ ನ ಇತರ ಸದಸ್ಯರು ಶೇರ್ ಮಾಡಿದ ಕಾರಣ ವೈರಲ್ ಆಗಿತ್ತು.

ಇದಲ್ಲದೆ ಈ ಗ್ರೂಪ್ ನಲ್ಲಿ ಇತರರೂ ಕೂಡಾ ಕೋಮು ಸೌಹಾರ್ಧತೆಯನ್ನು ಕೆಡಿಸುವಂತಹ ಸಂದೇಶಗಳನ್ನು ಹರಿಯ ಬಿಡುತ್ತಿದ್ದರು. ಈ ಕಾರಣಕ್ಕಾಗಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *